Sunday, August 1, 2010

ಕೊಟ್ಟು-ಪಡೆಯುವುದೇ ಗೆಳೆತನದ ಸೂತ್ರ...


ನನ್ನವರು, ಇವರೇ ನನ್ನ ಗೆಳೆಯರು...

ನೋವಲಿರುವವನ ಕಂಬನಿಗೆ ಮರುಗುವರು
ಅನಂದದಾ ಕ್ಷಣವ ಎಲ್ಲರಲೂ ಹಂಚುವರು
ನನ್ನವರು, ಇವರೇ ನನ್ನ ಗೆಳೆಯರು...

ಗೆದ್ದವನ ಹೊಗಳಿ ಶೂಲಕ್ಕೇರಿಸರು
ಸೋತವನ ತುಳಿದು ಪಾತಾಳಕ್ಕಿಳಿಸರು
ಸದಾ ಸಮರಸದ ಜೀವನವ ಹಾರೈಸುವರು
ನನ್ನವರು, ಇವರೇ ನನ್ನ ಗೆಳೆಯರು...

ಕಷ್ಟದಲಿರುವವನಿಗೆ ಹೆಗಲ್ಗೊಡುವರು
ಸಮಯದಿ ತ್ಯಾಗಕ್ಕೆ ಸಜ್ಜಾಗುವರು
ಸಜ್ಜನರು, ಇವರು ಉತ್ತಮೋತ್ತಮರು
ನನ್ನವರು, ಇವರೇ ನನ್ನ ಗೆಳೆಯರು...

ಇಂತಹ ಗೆಳೆಯರೊದಗುವುದು ಕೆಲವರಿಗೆ ಮಾತ್ರ
ಕೊಟ್ಟು-ಪಡೆಯುವುದೇ ಗೆಳೆತನದ ಸೂತ್ರ...

No comments:

Post a Comment